ಮಂಗಳೂರು, ಸೆ.29 ಮುಂದಿನ ತಿಂಗಳು ಸ್ವಲ್ಪ ತಿದ್ದುಪಡಿಗಳೊಂದಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಬಗ್ಗೆ ಸರಕಾರ ದಿಂದ ಆದೇಶ ದೊರೆಯುವ ಸಾಧ್ಯತೆ ಇದೆ. ಪ್ರಸಕ್ತ ಮಂಗಳೂರಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ನಗರಾಡಳಿತ ಸಚಿವರೊಂದಿಗೆ ಸಮಾ ಲೋಚನೆ ನಡೆಸಲಾಗಿದೆ ಎಂದು ಮೇಯರ್ ಶಂಕರ್ ಭಟ್ ತಿಳಿಸಿದರು.
ಮಂಗಳವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಸಭೆಯಲ್ಲಿ ವಿವಿಧ ವಿಷಯವಾಗಿ ಆಡಳಿತ ಪಕ್ಷವನ್ನು ವಿರೋಧ ಪಕ್ಷದ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಕಚೇರಿಯಲ್ಲಿಲ್ಲದ ಅಧಿಕಾರಿಗಳು: ಮನಪಾ ಸದಸ್ಯರಿಂದ ತರಾಟೆ
ಮನಪಾ ಅಧಿಕಾರಿಗಳು ಕಚೇರಿ ಯಲ್ಲಿರುವುದಿಲ್ಲ. ಮನಪಾ ಸದಸ್ಯರು ಕಚೇರಿಗಳಿಗೆ ಬಂದರೆ ಅಧಿಕಾರಿಯ ಕುರ್ಚಿ ಖಾಲಿ ಇರುತ್ತದೆ. ಕಳೆದ ಸಭೆ ಯಲ್ಲಿ ಮೇಯರ್ ನೀಡಿದ ಆದೇಶವೂ ಲೆಕ್ಕಕ್ಕಿಲ್ಲದಂತಾಗಿದೆ ಎಂದು ವಿಪಕ್ಷ ಸದಸ್ಯ ಹರಿನಾಥ್ ಹಾಗೂ ಆಡಳಿತ ಪಕ್ಷದ ಸದಸ್ಯರು ಮನಪಾ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ಕುರಿತು ಮೇಯರನ್ನೂ ತರಾಟೆಗೆ ತೆಗೆದುಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು ಇನ್ನು ಮುಂದೆ ಪ್ರತಿದಿನ ಅಧಿಕಾರಿಗಳು ಅಪರಾಹ್ಣ ೩:೩೦ ಗಂಟೆಯ ಬಳಿಕ ಹಾಗೂ ಪ್ರತಿ ಶನಿವಾರ ಇಡೀ ದಿನ ಸಾರ್ವಜನಿಕ ರಿಗೆ ತಮ್ಮ ಕಚೇರಿಗಳಲ್ಲಿ ಲಭ್ಯವಾ ಗುವಂತೆ ಆದೇಶ ನೀಡುವುದಾಗಿ ತಿಳಿಸಿದರು. ಅಲ್ಲದೆ ಸುರತ್ಕಲ್ ನಲ್ಲಿರುವ ಮಹಾನಗರ ಪಾಲಿಕೆಯ ಕಚೇರಿಗೂ ಭೇಟಿ ನೀಡಲು ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.
ಕದ್ರಿ ರಸ್ತೆ ಮುಚ್ಚುಗಡೆಗೆ ವಿರೋಧ
ಕದ್ರಿ ಪ್ರದೇಶದ ಪರಿಸರ ಸಂರಕ್ಷಣೆ ಗಾಗಿ ಅಲ್ಲಿನ ರಸ್ತೆ ಮುಚ್ಚುವ ಬಗ್ಗೆ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಬಡವರ ಮನೆಗೆ ಮನೆ ನಂಬ್ರ ನೀಡಿ
ಮನಪಾ ವ್ಯಾಪ್ತಿಯಲ್ಲಿ ಬಡವರ ಮನೆಗಳಿಗೆ ಮನೆ ನಂಬ್ರ ನೀಡಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ಮುಂದಿನ ತಿಂಗಳೊಳಗೆ ಈ ಬಗ್ಗೆ ತಾಂತ್ರಿಕ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪ ಮೇಯರ್ ರಜನಿ ದುಗ್ಗಣ್ಣ, ಆಯುಕ್ತ ಡಾ. ವಿಜಯ ಪ್ರಕಾಶ್ ಉಪಸ್ಥಿತರಿದ್ದರು.